ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಮಂಜೂರಾದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ನಡೆಯಲಿದ್ದು: ಇದಕ್ಕಾಗಿ ಉಚಿತ ತರಬೇತಿ ವ್ಯವಸ್ಥೆ ಮಾಡಲಾಗಿದೆ,90 ದಿನಗಳ ವಸತಿಯುತ Police Sub Inspector (PSI) ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಯನ್ನು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಯ ಮೂಲಕ ಪ್ರಾರಂಭಿಸಲು ಸರ್ಕಾರದಿಂದ ಆದೇಶ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ರಾಜ್ಯಾದ್ಯಂತ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಉತ್ತಮ ಫಲಿತಾಂಶ ಮತ್ತು ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗುವಂತೆ, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರಾಜ್ಯದ ಬೆಳಗಾವಿ/ಮೈಸೂರು ಕಂದಾಯ ವಿಭಾಗಗಳಲ್ಲಿ 90 ದಿನಗಳ ವಸತಿಯುತ ತರಬೇತಿ ನೀಡಲು ಉದ್ದೇಶಿಸಲಾಗಿ
ಅರ್ಹತೆ
1.ಅಭ್ಯರ್ಥಿಯು ಕರ್ನಾಟಕದ ಕಾಯಂ ನಿವಾಸಿಯಾಗಿದ್ದು ರಾಜ್ಯ ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ ಕ್ರಿಶ್ಚಿಯನ್ ಸಿಖ್ ಜೈನ್ ಬೌದ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದವರಾಗಿರಬೇಕು.
2. ಅಭ್ಯರ್ಥಿಯ ವಯಸ್ಸು 21 ರಿಂದ 30 ರೊಳಗಿರಬೇಕು.
3.ಯು.ಜಿ.ಸಿ ಇಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು.
4.ಸದರಿ ಅಭ್ಯರ್ಥಿಯು ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು
5.ಎತ್ತರ: ಪುರುಷರಿಗೆ ಕನಿಷ್ಠ 168 ಸೆಂ.ಮೀ ಮತ್ತು ಮಹಿಳೆಯರಿಗೆ ಕನಿಷ್ಠ 157 ಸೆಂ.ಮೀ
6.ತೂಕ: ಪುರುಷರಿಗೆ ಕನಿಷ್ಠ 50 ಕೆಜಿ ಮತ್ತು ಮಹಿಳೆಯರಿಗೆ ಕನಿಷ್ಠ 45 ಕೆಜಿ
7.ಎದೆ ಸುತ್ತಳತೆ (ಪುರುಷರಿಗೆ): ಕನಿಷ್ಠ 76 ಸೆಂ.ಮೀ
ಆಸಕ್ತ ಅಭ್ಯರ್ಥಿಗಳು https://sevasindhu.karnataka.gov.in/Sevasindhu/DepartmentServices ಅಥವಾ https://dom.karnataka.gov.in ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮೇ 23 ಕೊನೆಯ ದಿನಾಂಕವಾಗಿರುತ್ತದೆ.
0 Comments